ಧರೆಯ ಮಡಿಲಿಂದ ಹನಿಯು ಮೇಲಕ್ಕೆ ಪುಟಿದು ಬಾನ ಸೇರುವದು,
ಬಾನು ತನ್ನೊಡಲ ಬಿಸಿಯ ತಾಗಿಸಿ ಹನಿಗೆ ಭೂಮಿಯ ದಾರಿ ತೋರುವುದು,
ಧರೆಯ ಮಡಿಲು ಹನಿಗಿಲ್ಲ, ಬಾನ ಒಡಲು ಸಿಗಲಿಲ್ಲ..!!
ಬದುಕಿಯೂ ಸತ್ತ ಭಾವವೇ ಕೊನೆಗೆಲ್ಲಾ...
ಇದುವೇ ನನ್ನ ಮಡಿದ ಕವನ.
ಅಲೆಗಳ ಸ್ಪರ್ಶಕೆ ಮನಸೋತ ದಡವು ಹಸಿಯಾಗುವುದು
ನಂಬಿದಲೆಗಳು ಕ್ಷಣದೊಳು ಹಿಂದೆ ಸರಿಯೇ, ದಡವು ಏಕಾಂಗಿಯಾಗುವುದು.
ಮಲಗಿದ್ದ ದಡಕೆ ಹಸಿ-ಭಾವ ನೀಡಿ, ಸ್ವಪ್ನಗಳ ಹುಸಿಯ ಮಾಡಿ
ಸಮಯ ಅನುಕಿಸಿ ನಗುತಿರೆ, ಇದ್ದು ಇರದ ಭಾವದ ಅನಾವರಣ
ಇದುವೇ ನನ್ನ ಮಡಿದ ಕವನ.
ದೇವ,ಯಾರು ಇರದ ಹೃದಯ ಮಂದಿರದಿ, ಒಲವ ದೇವತೆಯ ಕೂಡಿಸಿದೆ
ನಾ ಪೂಜೆಗೆ ಅಡಿಯಾಗುವಂತೆ ಮಾಡಿ, ಮುಡಿಗೆ ಹೂ ತರಲು ಹೋದ ಸಮಯದಿ
ಕ್ಷಣದಲಿ ಒಲವ ದೇವಿಯ ಕಣ್ಮರೆ ಮಾಡಿದೆ
ದೇವರಿಲ್ಲದ ದೇವಾಲಯದಿ, ಉಸಿರಾಡುವ ಶವ ನಾನಾದೆ
ಇದುವೇ ನನ್ನ ಮಡಿದ ಕವನ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ