ಶನಿವಾರ, ಜನವರಿ 14, 2012

ನಿನಗಾಗಿ ನಾನೇನು ಬರೆಯಲಿ,ನಾನೇನು ಹಾಡಲಿ ?

ಪ್ರೀತಿ ಹೇಳದ ಪದಗಳನೇಕೆ ಪೊಣಿಸಲಿ
ಒಲವ ತುಂಬದ ಭಾವಗಳನೇಕೆ ಬೆರೆಸಲಿ
ಪ್ರೀತಿಸುವೆನೆಂದು ಸರಳವಾಗಿ ಹೇಗೆ ಹೇಳಲಿ ?
ನಿನಗಾಗಿ ನಾನೇನು ಬರೆಯಲಿ, ನಾನೇನು ಹಾಡಲಿ

ಉಸಿರ ಏರಿಲಿತದಲಿ ನೀ ನಿಂತಿರುವೆ
ಕಂಗಳಲಿ ಕಾಂತಿಯಾಗಿ ಕೂತಿರುವೆ
ನನ್ನೀ ತನು-ಮನಗಳ ನೀ ತುಂಬಿರುವೆ ಎಂದರೆ ನಂಬುವೆಯ ಗೆಳತಿ?
ಸಿಹಿ ಭಾವಗಳ ಹೇಗೆ ತಿಳಿಸಲಿ ಹೇಳೇ ಗೆಳತಿ
ನಿನಗಾಗಿ ನಾನೇನು ಬರೆಯಲಿ, ನಾನೇನು ಹಾಡಲಿ

ಸಾವಿನಾಚೆಯ ಊಹಿಸದ ಮೌನ ನೀನು
ನಿನ್ನ ಮೌನದಲಿ ಮೂಡಿದ ಮೋಡ ನಾನು
ಈ ಉಸಿರ ಮೋಡಕೆ ತುಸು ತಂಪೆರೆದು
ಬರಿದಾದ ಈ ಎದೆಭೂಮಿಗೆ ಪನ್ನೀರ ಎರಕ ಹೊಯ್ಯುವೆಯ ಗೆಳತಿ
ನಿನಗಾಗಿ ನಾನೇನು ಬರೆಯಲಿ, ನಾನೇನು ಹಾಡಲಿ

ನಿನ್ನ ನೆನಪುಗಳಲೇ ನೆನೆದಿರುವ ನನ್ನ ಮನದ
ಕೆಳುವೆಯ ಗೆಳತಿ ಹಾಡಿಯೂ ಹಾಡದ ಹಾಡೊಂದ
ಕಪ್ಪು ಕವಿದಿರುವ ಈ ಬದುಕಿಗೆ ಸೂಸುವೆಯ ಹೊನ್ನ ಕಿರಣ
ಜೊತೆಗಿದ್ದು ಜೊತೆಯಾಗದ ಈ ಜೀವಕೆ ಬರುವ ಮುನ್ನ ಮರಣ
ನಿನಗಾಗಿ ನಾನೇನು ಬರೆಯಲಿ, ನಾನೇನು ಹಾಡಲಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ