ಮಂಗಳವಾರ, ಜನವರಿ 17, 2012

KKNY Part 2

http://www.youtube.com/watch?v=6KMj88U3t3E

Hani KavanagaLu - KKNY

http://www.youtube.com/watch?v=q-aESc7DjH8

ಶನಿವಾರ, ಜನವರಿ 14, 2012

ಓ ಒಲವೇ ನೀ ಬೇಗ ಬಂದು ಬೀಡು.

ಓ ಒಲವೇ, ಬಂದು ಬೀಡು ತಡ ಮಾಡದೆ
ಕೊಂದು ಬೀಡು ಈ ಏಕಾಂತವನು ಚೂರು ದಯೆ ತೋರದೆ..
ಅರಿಘಳಿಗೆ ಯೋಚಿಸದೆ ಜಗದ ಹಂಗು ತೊರೆದು,
ಭವದ ಬಂಧಗಳನು ಮುರಿದು
ಬಾನಾಡಿಯಾಗಿ ಬಂದು ಬೀಡು ಈ ಮನದಂಗಳಕೆ..!!


ಆಕಾಶದೆತ್ತರಕೆ ನಿಂತ ಪರ್ವತಕೆ ಅಹಂಕಾರದ ಗತ್ತು
ಆದರೆ ಕಾಲಿಗೆ ಬಂಧನದ ಸರಪಳಿ..!!
ನೀನೋ ಹೂಮನ ಚುಂಬಿಸುವ ದುಂಭಿ,
ಹೂವಿಂದ ಮಕರಂದ ಹೀರುವ ಸ್ವಾತಂತ್ರ್ಯ ನಿನ್ನದು,
ಹೂವಿಂದ ಹೂವಿಗೆ ಹಾರಿ, ಶರವೇಗದಿ, ಸಪ್ತಸಾಗರಳನು ದಾಟಿ
ಈ ಮನದಿ ಮಿಚಾಗಿ ಸಂಚರಿಸಿಬೀಡು..
ಓ ಒಲವೇ ನೀ ಬೇಗ ಬಂದು ಬೀಡು.

ಕಪ್ಪು ಕವಿದ ಕಾರ್ಮೋಡಗಳ ಬಡಿದೋಡಿಸಿ
ಕಾಮನ ಬಣ್ಣಗಳಲಿ ಮಿಂದು,ತಂಗಾಳಿನ ತಮ್ಪಿನೊಡನೆ,
ಉಲ್ಲಾಸ ಲಹರಿಯಾಗಿ ಮನದಿ ನೆಲೆಸಿಬೀಡು..
ಕಂಗಳೀಗೆ ನಿನ್ನ ಪ್ರತಿಭಿಂಬ ತೋರಿಬೀಡು..
ಓ ಒಲವೇ ನೀ ಬೇಗ ಬಂದು ಬೀಡು.

ನೀತಿ-ನಿಯಮಗಳು,ಕಷ್ಟದ ಕಟ್ಟುಪಾಡುಗಳು
ಈ ಮಾನವ ನಿರ್ಮಿತ ಲೋಕಕೆ, ಅದರ ದಾಸರಿಗೆ..!!
ನೀನೋ ಜೀವನದಿಯಂತೆ,ಭಾವಗಂಗೆಯಂತೆ...
ಜುಳು-ಜುಳು ಹರಿಯುತ ಬಂದುಬೀಡು,
ನನ್ನ ನರನಾಡಿಗಳಲಿ ಬೇರೆತುಬೀಡು..
ಓ ಒಲವೇ ನೀ ಬೇಗ ಬಂದು ಬೀಡು.

ಮಡಿದ ಕವನ

ಧರೆಯ ಮಡಿಲಿಂದ ಹನಿಯು ಮೇಲಕ್ಕೆ ಪುಟಿದು ಬಾನ ಸೇರುವದು,
ಬಾನು ತನ್ನೊಡಲ ಬಿಸಿಯ ತಾಗಿಸಿ ಹನಿಗೆ ಭೂಮಿಯ ದಾರಿ ತೋರುವುದು,
ಧರೆಯ ಮಡಿಲು ಹನಿಗಿಲ್ಲ, ಬಾನ ಒಡಲು ಸಿಗಲಿಲ್ಲ..!!
ಬದುಕಿಯೂ ಸತ್ತ ಭಾವವೇ ಕೊನೆಗೆಲ್ಲಾ...
ಇದುವೇ ನನ್ನ ಮಡಿದ ಕವನ.

ಅಲೆಗಳ ಸ್ಪರ್ಶಕೆ ಮನಸೋತ ದಡವು ಹಸಿಯಾಗುವುದು
ನಂಬಿದಲೆಗಳು ಕ್ಷಣದೊಳು ಹಿಂದೆ ಸರಿಯೇ, ದಡವು ಏಕಾಂಗಿಯಾಗುವುದು.
ಮಲಗಿದ್ದ ದಡಕೆ ಹಸಿ-ಭಾವ ನೀಡಿ, ಸ್ವಪ್ನಗಳ ಹುಸಿಯ ಮಾಡಿ
ಸಮಯ ಅನುಕಿಸಿ ನಗುತಿರೆ, ಇದ್ದು ಇರದ ಭಾವದ ಅನಾವರಣ
ಇದುವೇ ನನ್ನ ಮಡಿದ ಕವನ.

ದೇವ,ಯಾರು ಇರದ ಹೃದಯ ಮಂದಿರದಿ, ಒಲವ ದೇವತೆಯ ಕೂಡಿಸಿದೆ
ನಾ ಪೂಜೆಗೆ ಅಡಿಯಾಗುವಂತೆ ಮಾಡಿ, ಮುಡಿಗೆ ಹೂ ತರಲು ಹೋದ ಸಮಯದಿ
ಕ್ಷಣದಲಿ ಒಲವ ದೇವಿಯ ಕಣ್ಮರೆ ಮಾಡಿದೆ
ದೇವರಿಲ್ಲದ ದೇವಾಲಯದಿ, ಉಸಿರಾಡುವ ಶವ ನಾನಾದೆ
ಇದುವೇ ನನ್ನ ಮಡಿದ ಕವನ.

ಮರಳಿ ಮನಕೆ

ಅಂದು ನಾನು ನಾನಗಿದ್ದೆ ಮೌನ ಗೂಡಾಗಿದ್ದೆ,
ಮನದ ಮುಗಿಲಾಗಿದ್ದೆ,ಇಂದೆನಾದೆನು ...?
ನನ್ನ ನಾನು ಮರೆತೆನು,ಹಣದ ಬಲೆಗೆ ಬಿದ್ದು ಹಾಳಾದೆನು
ನನ್ನ-ನನ್ನವರ ಮರೆತು ಮುಗಿಯದ ಮಾತಾದೆನು..!!
ಈ ನನ್ನವರಿಲ್ಲದ ಜಗದಲಿ ನನ್ನವರ ಹುಡುಕಿ ಸುಸ್ತಾದೆನು.

ಸಿಗದ ಪ್ರೀತಿ-ಒಲವಿಗಾಗಿ ಬೆಂದೆನು
ಈ ಜೀವದ ಜೀವಕೆ ಜೋತು ಬಿದ್ದು ಬರಗೆಟ್ಟು ಹೋದೆನು.!!
ಇಲ್ಲಿ ಎಲ್ಲಿ ನನ್ನವರು ? ನನ್ನ ಉಸಿರಲ್ಲಿ ಉಸಿರಾದವರು,
ಈ ಬಾಳಿಗೆ ಬೆಳಕು ನೀಡಿದವರು, ನನ್ನ ಆತ್ಮದ ಜ್ಯೋತಿ ಬೆಳಗಿದವರು,
ಎಲ್ಲಿ ಅವರು ?ನನ್ನ ನನ್ನಾಗಿಸಿದವರು..
ಇನ್ನೇನಿದ್ದರೂ ಅವರು ಕೇವಲ ಮರೀಚಿಕೆ..!!!!

ನಿನಗಾಗಿ ನಾನೇನು ಬರೆಯಲಿ,ನಾನೇನು ಹಾಡಲಿ ?

ಪ್ರೀತಿ ಹೇಳದ ಪದಗಳನೇಕೆ ಪೊಣಿಸಲಿ
ಒಲವ ತುಂಬದ ಭಾವಗಳನೇಕೆ ಬೆರೆಸಲಿ
ಪ್ರೀತಿಸುವೆನೆಂದು ಸರಳವಾಗಿ ಹೇಗೆ ಹೇಳಲಿ ?
ನಿನಗಾಗಿ ನಾನೇನು ಬರೆಯಲಿ, ನಾನೇನು ಹಾಡಲಿ

ಉಸಿರ ಏರಿಲಿತದಲಿ ನೀ ನಿಂತಿರುವೆ
ಕಂಗಳಲಿ ಕಾಂತಿಯಾಗಿ ಕೂತಿರುವೆ
ನನ್ನೀ ತನು-ಮನಗಳ ನೀ ತುಂಬಿರುವೆ ಎಂದರೆ ನಂಬುವೆಯ ಗೆಳತಿ?
ಸಿಹಿ ಭಾವಗಳ ಹೇಗೆ ತಿಳಿಸಲಿ ಹೇಳೇ ಗೆಳತಿ
ನಿನಗಾಗಿ ನಾನೇನು ಬರೆಯಲಿ, ನಾನೇನು ಹಾಡಲಿ

ಸಾವಿನಾಚೆಯ ಊಹಿಸದ ಮೌನ ನೀನು
ನಿನ್ನ ಮೌನದಲಿ ಮೂಡಿದ ಮೋಡ ನಾನು
ಈ ಉಸಿರ ಮೋಡಕೆ ತುಸು ತಂಪೆರೆದು
ಬರಿದಾದ ಈ ಎದೆಭೂಮಿಗೆ ಪನ್ನೀರ ಎರಕ ಹೊಯ್ಯುವೆಯ ಗೆಳತಿ
ನಿನಗಾಗಿ ನಾನೇನು ಬರೆಯಲಿ, ನಾನೇನು ಹಾಡಲಿ

ನಿನ್ನ ನೆನಪುಗಳಲೇ ನೆನೆದಿರುವ ನನ್ನ ಮನದ
ಕೆಳುವೆಯ ಗೆಳತಿ ಹಾಡಿಯೂ ಹಾಡದ ಹಾಡೊಂದ
ಕಪ್ಪು ಕವಿದಿರುವ ಈ ಬದುಕಿಗೆ ಸೂಸುವೆಯ ಹೊನ್ನ ಕಿರಣ
ಜೊತೆಗಿದ್ದು ಜೊತೆಯಾಗದ ಈ ಜೀವಕೆ ಬರುವ ಮುನ್ನ ಮರಣ
ನಿನಗಾಗಿ ನಾನೇನು ಬರೆಯಲಿ, ನಾನೇನು ಹಾಡಲಿ