ಬುಧವಾರ, ಡಿಸೆಂಬರ್ 19, 2012
ಹೇ ಮಾನವ,ಎಲ್ಲಿ ನಿನ್ನ ಮಾನವೀಯತೆ?
ಹೇ ಮಾನವ,ಎಲ್ಲಿ ನಿನ್ನ ಮಾನವೀಯತೆ?
ನೀ ಮರೆತೆರುವೆ ನಿನ್ನ ಹೆತ್ತ ತಾಯಿಯ ಮಮತೆ..!!
ಸೀತೆಯ ಸೀರೆಗೆ ಕೈ ಹಾಕುತಿರುವೆ ನೀನು,
ಆ ರಾವಣನ ಅವಸಾನದ ಹಾದಿಯ ಹೀಡಿದಿರುವೆ ನೀನು..!!
ಹೇ ಮಾನವ,ಎಲ್ಲಿ ನಿನ್ನ ಮಾನವೀಯತೆ?
ನಿನ್ನ,ಈ ಭುವಕೆ ತಂದವಳು ಆ ಮಹಾತಾಯಿ ನಾರಿ,
ತನ್ನೊಡಲ ಕರುಣೆಯಿಂದ ಬದುಕಿಗೆ ತೋರಿದಳು ದಾರಿ.
ಅಂದು ನಿನ್ನ ಜೀವಕೆ ಜೀವವ ನೀಡಿದವಳು ಅವಳು,
ಇಂದು ನಿನ್ನ ಹೇಯ ಕ್ರುತ್ಯಕೆ, ಕೊಲೆಯಾದವಳು ಅವಳು..!!
ಹೇ ಮಾನವ,ಎಲ್ಲಿ ನಿನ್ನ ಮಾನವೀಯತೆ?
ಬಾಲ್ಯದಲಿ ಸೋದರಿಯಾಗಿ ನಿನ್ನ ಒಂಟಿತನವ ಮರೆಸಿದವಳು ಅವಳು,
ತನ್ನ ಸಿಹಿಯ ಸದಾ ನಿನ್ನೊಂದಿಗೆ ಹಂಚಿ ಕೊಂಡವಳು ಅವಳು..!!
ಇಂದು, ನಿನ್ನ ಅಮಾನುಷ ವರ್ತನೆಗೆ ಬಲಿಯಾಗಿಹಳು,
ಹಗಲಿರುಳು ಅಂಜಿಕೆಯಲೇ ಬಾಳ ಬಂಡಿಯ ದೂಕುತಿಹಳು..!!
ಹೇ ಮಾನವ,ಎಲ್ಲಿ ನಿನ್ನ ಮಾನವೀಯತೆ?
ನಲ್ಲೆಯಾಗಿ,ಮಡದಿಯಾಗಿ,ಬಾಳಿಗೆ ಭಾವ-ಜೀವ ತುಂಬಿದವಳು ಅವಳು,
ಗೆಳತಿಯಾಗಿ,ಸಹಪಾಟಿಯಾಗಿ, ನಿನ್ನ ಯಶಸ್ಸಿಗೆ ಮೆಟ್ಟಿಲಾದವಳು ಅವಳು..!!
ಓ ಮನುಜಾ, ನೀ ಮರೆತಿರುವೆ ಅವಳು ತಂದುಕೊಟ್ಟ ಭಾಗ್ಯವ,ಅವಳ ಆ ತ್ಯಾಗವ,
ಎಚ್ಚರಾ ಮೂಢ, ನೀ ತೊಡುತಿರುವೆ ನಿನ್ನ ವಿನಾಶದ ಗುಂಡಿಯ..!!
ಹೇ ಮಾನವ,ಎಲ್ಲಿ ನಿನ್ನ ಮಾನವೀಯತೆ?
ನಿನ್ನ ಈ ಮಹಾಪಾಪಕಿಲ್ಲವೋ ಯಾವ ಪ್ರಾಯಶ್ಚಿತ, ನಿನ್ನ ಕೈಯಿಂದಲೇ ನಿನ್ನ ಸಾವು ನಿಶ್ಚಿತ..!!
ಹೇ ಮಾನವ,ಎಲ್ಲಿ ನಿನ್ನ ಮಾನವೀಯತೆ?
- Siddappa Mullalli
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ