ನಾ ಬರಿಯಬೇಕು, ನಾ ಬದುಕಬೇಕು
ಆದರೆ ಏನು ಬರೆಯಲಿ ? ಏಕೆ ಬರೆಯಲಿ ?
ಬರೆಯಲು ನನ್ನ ಬಳಿ ಪದಗಳಿಲ್ಲ,
ಪದಗಳ ಪೋಣಿಸುವ ನೈಪುಣ್ಯತೆಯೂ ನನ್ನಲಿಲ್ಲಾ..
ಆದರೂ ನಾ ಬರೀಯಬೇಕು..!!
ಬದುಕಲು ನನ್ನ ಬಳಿ ಆಸಗಳಿಲ್ಲ,
ಬದುಕಬೇಕೆಂಬ ಆಸೆಯೇ ನನಗಿಲ್ಲ,
ಆದರೂ ನಾ ಬದುಕಬೇಕು....
ದೇಶದಗಲಕ್ಕೂ ಹರಿದಾಡುವ ಗಂಗೆ ಪಾಪ ತೊಳೆವಳು
ನಾಡಿನಲ್ಲಿ ಹರಿಯುವ ತುಂಗೆ ದಾಹ ತೀರುವಳು
ನಿತ್ಯ ಉದಯಿಸುವ ಸೂರ್ಯ ಬೆಳಕ ನೀಡುವನು
ರಾತ್ರಿ ಕಂಗೊಳಿಸುವ ಚಂದ್ರ ತಂಪ ಸುರಿವನು
ಚೂರು ಆಯಾಸಗೊಲ್ಲದೆ ಭೂತಾಯಿ ಜಗದ ಭಾರ ಹೊರುವಳು
ಮಳೆಯ ಪ್ರತಿ ಹನಿಯೂ ಧರಣಿಯ ಹಸಿ ಮಾಡುವುದು
ಕಡಲ ಪ್ರತಿ ಅಲೆಯೂ ತೀರದ ಮೈ ತೊಳೆಯುವುದು
ಬೆಳಕಿನ ಪ್ರತಿ ಕಿರಣವು ಕತ್ತಲೆ ಹೊಡೆದೋಡಿಸುವುದು
ಅನ್ನದ ಪ್ರತಿ-ಕಾಳು ಹಸಿವ ನೀಗಿಸುವುದು
ಪ್ರತಿ ಬ್ರಹ್ಮಸೃಷ್ಟಿಗೂ ಒಂದು ಉದ್ದೇಶವಿದೆಯಲ್ಲವೇ ?
ಹೌದಾದರೆ, ಈ ನನ್ನ ಮಾನವ ಜನ್ಮಕೂ ಒಂದು ಉದೀಶವೀರಲೇಬೇಕು,
ಆ ಉದ್ದೇಶವ ನಾನರಿಯಬೇಕು...
ನನ್ನ ನಾ ತಿಳಿಯಲು ನಾ ಬರೀಯಬೇಕು
ಈ ಆತ್ಮಜ್ಯೋತಿಯ ಸಾಕ್ಷಾತ್ಕಾರಕ್ಕೆ ನಾ ಬದುಕಲೇಬೇಕು...!!
ಹೌದು, ನಾ ಬರೀಯಬೇಕು, ನಾ ಬದುಕಬೇಕು...!!!