ಶನಿವಾರ, ನವೆಂಬರ್ 20, 2010

ಪ್ರೀತಿ ನಮಗೆ ಬೇಕೇ ?

ಎತ್ತ ನೋಡಿದರತ್ತ , ಹಾರುತಿಹುದು ಚಿತ್ತ
ಮನರತ ಸಾರತಿಯ ಕೈಯಲ್ಲಿ ಇಲ್ಲದಿರಲು ಬೆತ್ತ
ಇದು ಎಲ್ಲ ಹುಡುಗಿಯರ ನೋಡುವುದು ಸುತ್ತ -ಮುತ್ತ !!!
ನನ್ನ ಈ ಮನಸ್ಸಿನ ಅಲೆದಾಟಕೆ ,ಮದ್ದು ಯಾರಿಗಾದರು ಗೊತ್ತಾ?

ಇ ಮನವು ಕಾಲವೆಂಬ ಪಯಣದಲಿ ನೊಂದರು
ಪ್ರೀತಿಯೆಂಬ ಬೆಂಕಿಯಲಿ ಬೆಂದರು
ಮೋಹದ ಮನೆಯಲಿ ಸಂಕಟ ಊಂಡರು
ದೊರೆಯದ ವಳುಮೆಗಾಗಿ, ಬಳಲಿ ಬಹಳ ನೋವು ಕಂಡರೂ
ತನ್ನ ತಾನು ಮರೆತು ಅವಳತ್ತ ವಾಲುವುದು ಯಾಕೆ?
ಇದ ನೆನೆದು ನನಗೆ ಆಗುತಿಹುದು ಅಂಜಿಕೆ ..:-)

ಪ್ರೇಮ ಪಾತಾಳಕ್ಕೆ ಧುಮುಕಿ
ಪ್ರೀತಿಯೆಂಬ ಹುಚ್ಚು ಸುಲಿಗೆ ಸಿಲುಕಿ
ತಂದೆ-ತಾಯಿಯರಿಂದ ದೂರ ಹೋಗಿ
ತಮ್ಮದೇ ಕಲ್ಪನಾ ಲೋಕದಲ್ಲಿ ಸಾಗಿ
ಕೊನೆಗೆ 'ಕೊನೆ ' ಕಾಣದೆ ಸೋತ ಜನರೆಷ್ಟೋ ?
ಕೆಲವೊಮ್ಮೆ ಸಾವಿನ ಮೊರೆ ಹೋದವರೆಷ್ಟೋ ?

ಯಾಕೆ ಇಂತಹ ನೋವಿನ ಬದುಕು ನಮಗೆ
ಬೇಡವಾಗಿದೆಯೇ ಹಿರಿಯರ ವಲವು ನಮಗೆ !!!!
ಇಲ್ಲ ಪ್ರೀತಿಯೆಂಬ ಸುಳಿಗ ಸಿಗುವುದಿಲ್ಲ ನಾನು
ಎಂದೆಂದೂ ನನ್ನ ಮರೆಯುವುದಿಲ್ಲ ನಾನು
ಇಗೋ ಪ್ರೀತಿಯೇ ನಿನಗೆ ಕೋಟಿ ಕೋಟಿ ಶರಣು
ಇನ್ನೆಂದೂ ನಿನ್ನಲ್ಲಿಗೆ ಸೆಳೆಯದಿರು ನನ್ನನು..

ನಿನ್ನ ಮೊದಲ ಬಾರಿ ನೋಡಿದಾಗ..!!!

ನಿನ್ನ ಮೊದಲ ಬಾರಿ ನೋಡಿದಾಗ..!!!
ಸ್ತಬ್ದವಾಯ್ತು ಮನ, ಶಬ್ದವಾಯ್ತು ಮೌನ
ತಂಪು-ತಂಪಾಯ್ತು ನಯನ
ಹಚ್ಚ ಹಸಿರಾಯ್ತು ಮನದ ಕಾನನ
"ನೀನೆ ನನ್ನುಸಿರು"ದೆಂಬುದಾಯ್ತು ಮನನ
ನನ್ನೆದೆಯಲಾಯ್ತು ಪ್ರೇಮದ ಜನನ
ಪ್ರೀತಿ ಪಿಸುಮಾತಿಗೆ ಕಾಯಲಾರಂಬಿಸಿತು ಗಗನ
ಇಷ್ಟೆಲ್ಲಾ ಆಗುವುದೊರೋಳಗಾಗಿ ಮುಗಿದು ಹೋಗಿತ್ತು ನನ್ನ ಯೌವ್ವನ....!!!

ಹೃದಯಾ ಸಣ್ಣ ಮಗು..!!

ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ
ಉಗುರು ಕಚ್ಚುವೇನು ನಿಂತಲ್ಲೇ ನಿಂತ ಕಡೆ
ಮನಸು ನಕ್ಷತ್ರ ಹುಡುಕುವುದು ಎಲ್ಲ ಕಡೆ
ವಯಸು ತಿಳಿಯದೇನೆ ಇಳಿಯುವುದೇ ಇಂತ ಕಡೆ
ಹೋ ನನ್ನಂತ ನನಗು ಎನಾಯಿತಿಂದು
ಈ ಒಂಟಿ ರಾತ್ರಿಯಲಿ ಅವಳ ಗುಂಗು ...
ಹೃದಯಾ ಸಣ್ಣ ಮಗು..! ಹೃದಯಾ ಸಣ್ಣ ಮಗು ..!!
ತುಂಬ ತುಂಟ ಮಗು..!! ಹಾಂ.. ಹೃದಯಾ ಸಣ್ಣ ಮಗು..!!
ಹಾಂ ..ಹಾಂ...ಹಃ..ಹಾಂ ..ಹಾಂ...ಹಃ

ಕೂಡಿಟ್ಟ ಕನಸು, ಮಗುವಾದ ಮನಸು
ಒಂದಾಗಿ ಮೊಗದಲ್ಲಿ ಹೊಸ ಸೊಗಸು
ಈ ಪ್ರೀತಿ- ಪ್ರೇಮ ಬೇಡೆಂದ ನನಗೆ
ಒಳ-ಒಳೊಗೆ ಒಲವೆಂಬ ಕೂಸು..
ಈ ಹೃದಯ ಹಾಡುತಿದೆ, ಇಗೋ ಹಾರುತಿದೆ
ಮಾತು -ಮಾತೆಲ್ಲೇನೆe ಎಲ್ಲಾ ಹೇಳುತಿದೆ .......
ಮನಸಿನಂತಾ.. ಮುದ್ದು ಕೋತಿ ಮತ್ತೊಂದಿಲ್ಲ ....
ನಿಲ್ಲು ನೀ ನಿಲ್ಲು , ಹಾರದಿರು ಮೇಲೆ
ಈ ವಯಸ್ಸಿನಲ್ಲಿ ಹಾರಿದರೆ ಬಾಳೆಲ್ಲ ಗೋಳೇ
ಈ ಪ್ರೀತಿ ಸುಳಿಯಿಂದ ದೂರ ಸಾಗು ...
ಹೃದಯಾ ಸಣ್ಣ ಮಗು..! ಹೃದಯಾ ಸಣ್ಣ ಮಗು ..!!


ನಿನ್ನ ಒಲವಿನ ಮೋಡ ಮನದಲ್ಲಿ
ಹನಿ ಹನಿಯಾಗಿ ಮಳೆಯಾ ಸುರಿಸುತಲಿದೆ
ಆ ನಿನ್ನ ನಗುವು ,ಆ ಕಾಡುವ ಮೌನ
ಕ್ಷಣ ಕ್ಷಣವೂ ನನ್ನೆದೆಯ ಸುಡುತಲಿದೆ ...
ಮನಸು ಮಿಡಿಯುತಿರಲು , ಆಸೆ ಕುಣಿಯುತಿರಲು
ಈ ಕಣ್ಣು ಬರೀ ನಿನ್ನನೆ ಹುಡುಕುತಿರಲು ...
ನಿನ್ನಲೇ....... ನಾ ಕಳೆದು ಹೋಗಿರುವೇನು ..
ಈ ಸಮಯಾ ಇಂದು , ಸರಿಗಮದಿ ಮಿಂದು
ನನ್ನೊಳಗೆ ಸೂಸುತಿದೆ ಪ್ರೀತಿಯ ರಂಗು
ಹೃದಯಾ ಸಣ್ಣ ಮಗು..! ಹೃದಯಾ ಸಣ್ಣ ಮಗು ..!!



ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ
ಉಗುರು ಕಚ್ಚುವೇನು ನಿಂತಲ್ಲೇ ನಿಂತ ಕಡೆ
ಮನಸು ನಕ್ಷತ್ರ ಹುಡುಕುವುದು ಎಲ್ಲ ಕಡೆ
ವಯಸು ತಿಳಿಯದೇನೆ ಇಳಿಯುವುದೇ ಇಂತ ಕಡೆ
ಹೋ ನನ್ನಂತ ನನಗು ಎನಾಯಿತಿಂದು
ಈ ಒಂಟಿ ರಾತ್ರಿಯಲಿ ಅವಳ ಗುಂಗು ...
ಹೃದಯಾ ಸಣ್ಣ ಮಗು..! ಹೃದಯಾ ಸಣ್ಣ ಮಗು ..!!
ತುಂಬ ತುಂಟ ಮಗು..!! ಹಾಂ.. ಹೃದಯಾ ಸಣ್ಣ ಮಗು..!!
ಹಾಂ ..ಹಾಂ...ಹಃ..ಹಾಂ ..ಹಾಂ...ಹಃ


ಇದು ಹಿಂದಿ ಚಿತ್ರ "ಈಶ್ಕಿಯಾ"ದ ಸೊಗಸಾದ ಗುಲ್ಜಾರ್ ಲೇಖನಿಯಲಿ ಮೂಡಿ ಬಂದ ಸುಂದರ ಗೀತೆ 'Dil to baccha hain ji .."ಯಾ ಕನ್ನಡ ಅನುವಾದ..( ಒಂದು ಸಣ್ಣ ಪ್ರಯತ್ನ..ಮೊದಲ ನುಡಿ ನನ್ನದಲ್ಲ...youtube ಅಲ್ಲಿ ಸಿಕ್ಕ ನುಡಿ...).
ನೈಜ ಹಾಡಿನ ಭಾವವನ್ನ ಇಲ್ಲಿ ತರೋದಕ್ಕೆ ಪ್ರಯತ್ನಿಸಿದ್ದೀನಿ. ಪ್ರಯತ್ನದಲ್ಲಿ ಏನಾದರು ತಪ್ಪಿದ್ದರೆ ದಯವಿಟ್ಟು ತಿದ್ದಿ....ಇಂತಿ ನಿಮ್ಮವ - ಸಿದ್ದು

ನಿನ್ನ ಹೃದಯಕೆ ನಾ ಮಾಡೆನು ಕರೆಯನ್ನ

ಹಗಲಿರುಳೆನ್ನದೆ ಬಯಸುವೆ ನಾ ನಿನ್ನ
ಆದರೂ ಇನ್ನೆಂದು ನೆನೆಯೇನು ನಿನ್ನ ಹೆಸರನ್ನ
ನಿನ್ನ ಹೃದಯಕೆ ನಾ ಮಾಡೆನು ಕರೆಯನ್ನ .....!
ನಿನ್ನ ಹೃದಯಕೆ ನಾ ಮಾಡೆನು ಕರೆಯನ್ನ .....!!


ನೋಡು ನನ್ನ ನಲ್ಲೆ , ನಾನೆಲ್ಲಾ ಬಲ್ಲೆ
ನೀ ಮಿರೋಲ್ಲಾ ಅಂತ ಮನದ ಎಲ್ಲೇ
ಒಲವೆ ..ನನ್ನ ಪ್ರಾಣವೇ...
ಮತ್ತೆ ಮತ್ತೆ ನಿನ್ನ
ಹೃದಯಕೆ ನಾ ಮಾಡೆನು ಕರೆಯನ್ನ ...


ನನ್ನ ನೋವು ನೀ , ನನ್ನ ನಲಿವುನೂ ನೀ
ನನ್ನ ಬೆಳಕು ನೀ ಬಾಳೂ ನೀ
ಜೀವವೇ ....ನನ್ನ ಭಾವವೇ...
ಮತ್ತೆ ಮತ್ತೆ ನಿನ್ನ
ಹೃದಯಕೆ ನಾ ಮಾಡೆನು ಕರೆಯನ್ನ...


ಹಗಲಿರುಳೆನ್ನದೆ ಬಯಸುವೆ ನಾ ನಿನ್ನ
ಆದರೂ ಇನ್ನೆಂದು ನೆನೆಯೇನು ನಿನ್ನ ಹೆಸರನ್ನ
ನಿನ್ನ ಹೃದಯಕೆ ನಾ ಮಾಡೆನು ಕರೆಯನ್ನ..


ಸೂಚನೆ : ಇದು ೧೯೬೪ ರ ದೋಸ್ತಿ ಚಿತ್ರದ "Chahunga main tujhe saanj savere ......Awaaz maina dungaa" ಹಾಡಿನ ನಾನು ಮಾಡಿದ ಕನ್ನಡ ಅನುವಾದ.